ಹರಪ್ಪ ಪುಸ್ತಕ ಸರಣಿಯ ಹಿನ್ನೆಲೆ – ಡಾ ಶಂಕರ್ ಕಾಶ್ಯಪ್ ಅವರು ಬರೆದ ಲೇಖನ

My article published in my mother tongue – Kannada.

ಅನಿವಾಸಿ - ಯು.ಕೆ ಕನ್ನಡಿಗರ  ತಂಗುದಾಣ

ನಾನು ಇತ್ತೀಚೆಗೆ ಹರಪ್ಪ ನಾಗರೀಕತೆಯ ಪುಸ್ತಕಗಳ ಸರಣಿಯನ್ನು ಬರೆಯಲು ಪ್ರಾರಂಭ ಮಾಡಿದ್ದೇನೆ. ಈ ಸರಣಿಯ ಮೊದಲ ಪುಸ್ತಕ ”ಹರಪ್ಪ; ಸೋಮನ ಆಕರ್ಷಣೆ”  (The Lure of Soma)  ಕಳೆದ ವರ್ಷ (2013) ಪ್ರಕಟವಾಗಿದೆ

.Final Cover oct 3CiviltàValleIndoMappa

Map: CC Wiki

ನಾನೇಕೆ ಬರೆದೆ?

ಶಾಲೆಯಲ್ಲಿ ಹರಪ್ಪ ಮತ್ತು ಮೊಹೆಂಜೋದಾರೋ ಅವಶೇಷಗಳ ಬಗ್ಗೆ ಕಲಿತ ನಂತರದ ದಿನಗಳಿಂದಲೂ, ನಾನು ಭಾರತದ ಪ್ರಾಚೀನ ಇತಿಹಾಸದಿಂದ ಬಹಳಷ್ಟು  ‌ಆಕರ್ಷಿಸಲ್ಪಟ್ಟಿದ್ದೇನೆ.  ಆ ಸಮಯದಲ್ಲಿ, ಈ ವಿಷಯದ ಬಗ್ಗೆ ಲಭ್ಯವಿದ್ದ ಸಾಹಿತ್ಯ ಬಹಳ ವಿರಳವಾಗಿದ್ದು, ಅದನ್ನು ದೊರಕಿಸಿಕೊಳ್ಳುವುದು ಒಬ್ಬ ಶಾಲಾ ವಿದ್ಯಾರ್ಥಿಯ ಪಾಲಿಗಂತೂ ಅತ್ಯಂತ ಕಷ್ಟಕರವಾದ ಕಾರ್ಯವೆನಿಸಿತ್ತು.  ಅಲ್ಲಿಂದೀಚೆಗೆ, ಸಿಂಧೂ ಕಣಿವೆ ನಾಗರೀಕತೆಯ ಉತ್ಖನನದ ಕೆಲಸದ ಗತಿ ಚುರುಕಾಗಿ ನಡೆದಿದೆ, ಹಾಗೂ ಇದರಿಂದ, ಭಾರತೀಯ  ಪೂರ್ವ ಇತಿಹಾಸದ ಬಗ್ಗೆ ನಮಗಿರುವ ಗ್ರಹಿಕೆ ಅಗಾಧವಾಗಿ ಬದಲಾಯಿಸಿದೆ. ಶಾಲೆಯಲ್ಲಿ ನಮ್ಮ ಶಿಕ್ಷಕರು, ಈ ಮಹಾನ್ ಸಿಂಧೂ ಕಣಿವೆಯ ನಾಗರೀಕತೆಯ ಬಗ್ಗೆ ನಮಗೆ ಪಾಠ ಮಾಡಿದ್ದು ಈಗಲೂ ನೆನಪಿದೆ. ಅದೇನೆಂದರೆ, ಕ್ರಿ.ಪೂ 1500 ರಲ್ಲಿ,  ರಶಿಯಾದ ಸ್ಟೆಪ್ಪೀಸ್ ಹುಲ್ಲುಗಾಡು ಪ್ರದೇಶದಿಂದ ಬಂದ ಲೂಟಿಕೋರರಾದ ಆರ್ಯರು, ಈ ನಾಗರೀಕತೆಯನ್ನು ನಾಶ ಮಾಡಿದರು ಎಂದು.  ದುರದೃಷ್ಟವಶಾತ್, ಅನೇಕ ವಿದ್ವಾಂಸರು ಈಗಲೂ ವಿಶ್ವದಾದ್ಯಂತ ಇದೇ ಕಥೆಯನ್ನು ಪ್ರಚಾರ ಮಾಡುತ್ತಿದ್ದಾರೆ.ಆದರೂ ಸಹಾ, ಅವರಿಗೆ ಅಗಾಧವಾದ ವೇದ ಸಂಗ್ರಹಗಳ ಸೃಷ್ಟಿಯ ಕರ್ತೃತ್ವವನ್ನು ನೀಡಲಾಗಿದೆ.  ವೇದಗಳನ್ನು,  ಪ್ರಾಚೀನ ಜಗತ್ತಿನ ಅತ್ಯಂತ ಬೃಹತ್ ಮತ್ತು ಗಹನವಾದ ಜ್ಞಾನವುಳ್ಳ  ಗ್ರಂಥಗಳೆಂದು ಒಪ್ಪಿಕೊಂಡಿದ್ದಾರೆ.  ಗ್ರಂಥಗಳಲ್ಲಿ ಅಡಕವಾಗಿರುವ ಜ್ಞಾನ, ಎಷ್ಟೊಂದು ಪ್ರಗತಿಪರವಾಗಿದೆ ಎಂದರೆ, ಇವು, ಇಂತಹ ಪ್ರಾಚೀನ ಕಾಲದಲ್ಲಿ, ಉತ್ಪತ್ತಿಯಾಯಿತೆಂಬುದನ್ನು…

View original post 1,008 more words

One thought on “ಹರಪ್ಪ ಪುಸ್ತಕ ಸರಣಿಯ ಹಿನ್ನೆಲೆ – ಡಾ ಶಂಕರ್ ಕಾಶ್ಯಪ್ ಅವರು ಬರೆದ ಲೇಖನ

Leave a comment